ಈ ಕಾಳುಗಳನ್ನು ತಿಂದ್ರೆ ದೇಹಕ್ಕೆ ಆಯಾಸ ಸುಸ್ತು ಸೇರಿದಂತೆ 10 ಕ್ಕೂ ಹೆಚ್ಚು ಸಮಸ್ಯೆಗೆ ಪರಿಹಾರವಿದೆ: Eating these grains has a solution

Eating these grains: ಡಯಾಬಿಟಿಸ್, ಕೊಲೆಸ್ಟ್ರಾಲ್, ಕೀಲುನೋವು, ರಕ್ತ ಹೀನತೆ, ಹೀಗೆ ಅನೇಕ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಮುಖ್ಯವಾಗಿ ಈ ಮೂರು ಕಾಳು ಧಾನ್ಯಗಳನ್ನು ಬಳಸಿಕೊಂಡು ಪರಿಹರಿಸಿಕೊಳ್ಳಬಹುದು. ಮೊದಲಿಗೆ ಹುರಳಿ ಕಾಳು. ಹುರಳಿ ಕಾಲಿನ ಬಗ್ಗೆ ತಿಳಿದಿಲ್ಲ ಎನ್ನುವ ಜನರಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರತ್ತೆ. ಹುರುಳಿಕಾಳಿಂದ ನಾವು ಹಲವಾರು ಬಗೆಯ ಅಡುಗೆಯನ್ನ ಮಾಡುತ್ತೇವೆ. ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇರುತ್ತವೆ ಹಾಗೂ ವಿವಿಧ ರೀತಿಯ ರೋಗಗಳನ್ನು ಬಗೆಹರಿಸುವ ಗುಣಗಳೂ ಸಹ ಇದೆ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.

ಚಿಕ್ಕ ಮಕ್ಕಳಿಗೆ ಅಂತೂ ಹುರುಳಿ ಕಾಲು ಉತ್ತಮ ಟಾನಿಕ್ ರೀತಿಯಲ್ಲಿ ಸಹಾಯಕಾರಿ ಆಗಿದೆ. ಹುರುಳಿ ಕಾಲನ್ನು ಸೇವಿಸುವುದರಿಂದ ಬೊಜ್ಜು ಹೆಚ್ಚಾಗಿ ಇರುವುದಿಲ್ಲ. ಹುರುಳಿ ಕಾಲನ್ನು ಹಾಗೆ ತಿನ್ನುವುದಕ್ಕಿಂದ ನೆನೆಸಿ ಬೇಯಿಸಿ ತಿನ್ನಬಹುದು ಅಥವಾ ನೆನೆಸಿಟ್ಟು ಮೊಳಕೆ ತರಿಸಿಯೂ ತಿನ್ನಬಹುದು. ಆದರೆ ಪಿತ್ತ ದೋಷದ ಸಮಸ್ಯೆ ಇರುವವರು, ಮುಖದ ಮೇಲೆ ಮೊಡವೆ ಇರುವವರು , ಅಸಿಡಿಟಿ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಒಂದು ಬೌಲ್ ಗೆ 2 ಸ್ಪೂನ್ ಅಷ್ಟು ಹುರುಳಿ ಕಾಳನ್ನು ಹಾಕಿ ಎರಡು ಮೂರು ಬಾರಿ ಚೆನ್ನಾಗಿ ತೊಳೆದು ನೀರು ಹಾಕಿ ರಾತ್ರಿ ಇಡೀ ನೆನೆಯಲು ಬಿಡಬೇಕು. ರಾತ್ರಿ ಇಡೀ ನೆನೆಸಿಟ್ಟ ಹುರುಳಿ ಕಾಳನ್ನು ಬೆಳಿಗ್ಗೆ ತಿಂಡಿಯ ಜೊತೆಗೆ ಸೇವಿಸಬಹುದು ನಂತರ ಅದರ ನೀರನ್ನು ಸಹ ಕುಡಿಯಬಹುದು. ಇನ್ನು ಅಸಿಡಿಟಿ ಅಂತಹ ಮೇಲೆ ಹೇಳಿದ ಸಮಸ್ಯೆಗಳು ಇಲ್ಲದವರು ಹುರುಳಿ ಕಾಳನ್ನು ರಾತ್ರಿ ನೆನೆಸಿಟ್ಟು ಸಾಂಬಾರ್ ಅಥವಾ ಪಲ್ಯ ಮಾಡಿಕೊಂಡು ಕೂಡಾ ತಿನ್ನಬಹುದು.

ನೆನೆಸಿದ ಹುರುಳಿ ಕಾಳನ್ನು ಯಾರು ಬೇಕಿದ್ದರೂ ಸೇವಿಸಬಹುದು. ಇದರಲ್ಲಿ ಸಾಕಷ್ಟು ಕ್ಯಾಲ್ಶಿಯಂ, ಐರನ್, ಪಾಸ್ಪರಸ್, ಫೈಬರ್ ಅಧಿಕವಾಗಿ ಇರುತ್ತವೆ. ಇದು ನಮ್ಮ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸಿ ಹೃದಯ ಸಂಬಂಧಿತ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಕೆಲವರಿಗೆ ಕಣ್ಣಲ್ಲಿ ಪದೇ ಪದೇ ನೀರು ಬರುತ್ತಾ ಇರುತ್ತದೆ ಅದನ್ನು ಸಹ ಹುರುಳಿ ಕಾಳು ತಡೆಯುತ್ತದೆ. ತೂಕ ಕಡಿಮೆ ಮಾಡಲು ಇದು ಉತ್ತಮವಾದದ್ದು. ತೂಕ ಇಳಿಸಿಕೊಳ್ಳಲು ಹುರುಳಿ ಕಾಲನ್ನು ಹುರಿದು ಪುಡಿ ಮಾಡಿಕೊಂಡು ಪ್ರತೀ ದಿನ ಬೆಳಿಗ್ಗೆ ಒಂದು ಲೋಟ ನೀರಿಗೆ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕ್ರಮೇಣವಾಗಿ ತೂಕ ಇಳಿಸಿಕೊಳ್ಳಬಹುದು.

ಎರಡನೆಯ ಧಾನ್ಯ ಹೆಸರುಕಾಳು ಸಹ ಎಲ್ಲರಿಗೂ ತಿಳಿದೇ ಇರುತ್ತವೆ. ಹೆಸರುಕಾಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ , ಪಾಸ್ಪರಸ್ ಅಂತಹ ಇನ್ನೂ ಕೆಲವು ಪೋಷಕಾಂಶಗಳನ್ನು ಹೆಸರುಕಾಳು ಹೊಂದಿದೆ. ಒಂದು ಹಿಡಿ ಅಷ್ಟು ಹೆಸರು ಕಾಳನ್ನು ರಾತ್ರಿ ಚೆನ್ನಾಗಿ ತೊಳೆದು ರಾತ್ರಿ ಇಡೀ ನೆನೆಸಿಟ್ಟು ಮೊಳಕೆ ತರಿಸಿ ತಿನ್ನಬೇಕು. ಇದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಪ್ರೊಟೀನ್ ಗಳು ಸಿಗುತ್ತವೆ. ನಮ್ಮ ದೇಹಕ್ಕೆ ಹೆಚ್ಚಿನ ಪ್ರೊಟೀನ್ ಗಳು ಮಾಂಸಾಹಾರದಿಂದ ಸಿಗುತ್ತವೆ. ಮಾಂಸಾಹಾರ ಇಷ್ಟ ಪಡದವರು ಈ ನೆನೆಸಿಟ್ಟ ಮೊಳಕೆ ಬಂದ ಹೆಸರಕಾಳನ್ನು ಸೇವಿಸುವ ಮೂಲಕ ಸಾಕಷ್ಟು ಪ್ರೊಟೀನ್ ಗಳನ್ನು ಪಡೆದುಕೊಳ್ಳಬಹುದು. ಇದರಿಂದ ನಮ್ಮ ದೇಹದಲ್ಲಿ ಕೀಲುನೋವು ಇದ್ದರೂ ಸಹ ಮಾಯವಾಗುತ್ತದೆ. ನಮ್ಮ ಶರೀರದಲ್ಲಿ ಹೆಚ್ಚಾದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಟ್ಟ ಕೊಬ್ಬನ್ನು ಕರಗಿಸಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಮುಖ್ಯವಾಗಿ ಐರನ್ ಲೋಪದಿಂದ ಬಳಲುವವರು ಪ್ರತೀ ದಿನ ಮೊಳಕೆ ಕಟ್ಟಿದ ಹೆಸರುಕಾಳು ಸೇವಿಸುವುದರಿಂದ ರಕ್ತ ಕಣಗಳು ಹೆಚ್ಚಾಗಿ ಐರನ್ ಅಂಶ ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಸಿ , ಡಿ , ಪ್ರೊಟೀನ್ ಹಾಗೂ ಮ್ಯಾನ್ಗನೀಸ್ ಗುಣಗಳು ಹೆಚ್ಚಾಗಿ ಇರುತ್ತವೆ. ಹಾಗಾಗಿ ಈ ಮೊಳಕೆ ಹೆಸರು ಕಾಲನ್ನು ಆದಷ್ಟು ಬೆಳಿಗ್ಗೆ ಸಮಯದಲ್ಲಿ ತೆಗೆದುಕೊಳ್ಳುವುದು ಉತ್ತಮ ಸಂಜೆ ಬೇಕಿದ್ದರೂ ತೆಗೆದುಕೊಳ್ಳಬಹುದು.

ಇನ್ನು ಕೊನೆಯ ಧಾನ್ಯ ಎಂದರೆ ಕಡಲೆ. ಕಡಲೆ ಹಲವಾರು ರೀತಿಯ ಪೋಷಕಾಂಶಗಳ ಆಗರವಾಗಿದೆ. ಇದನ್ನು ಬಡವರ ಬಾದಾಮಿ ಎಂದೂ ಸಹ ಕತೆಯುತ್ತಾರೆ ಕಾರಣ ಬಾದಾಮಿಯಲ್ಲಿ ಇರುವಷ್ಟೇ ಪ್ರೊಟೀನ್ ಹಾಗೂ ವಿಟಮಿನ್ ಗಳು ಈ ಕಡಲೆಯಲ್ಲಿ ಇರುತ್ತವೇ. ಈ ಕಡಲೆಯನ್ನು ನೆನೆಸಿ ತಿಂದರೂ ಬೇಯಿಸಿ ತಿಂದರೂ ಹೇಗೆ ತಿಂದರೂ ಸಹ ನಮ್ಮ ಆರೋಗ್ಯಕ್ಕೆ ಇದು ಒಳ್ಳೆಯದೇ. ಇದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಬಹುದು. ಯಾರಿಗೆಲ್ಲ ನಿಶ್ಯಕ್ತಿ ಇರುತ್ತದೋ ಅಂತವರು ಇದನ್ನು ಪ್ರತೀ ದಿನ ಸೇವಿಸುವುದರಿಂದ ತೂಕ ಹೆಚ್ಚಿಸುವುದರ ಜೊತೆಗೆ ಉತ್ತಮ ಶಕ್ತಿಯನ್ನೂ ನೀಡುತ್ತದೆ. ಕಡಲೆಯನ್ನು 15 , 16 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಸ್ವಲ್ಪ ಆಗಿಯೇ ಕೊಡುವುದನ್ನ ಅಭ್ಯಾಸ ಮಾಡಿಕೊಳ್ಳಬೇಕು. ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ಈ ಮೂರು ಧಾನ್ಯಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯ ಪೋಷಕಾಂಶಗಳನ್ನು ಒದಗಿಸುವ ಧಾನ್ಯಗಳು. ಇವುಗಳನ್ನು ಪ್ರತೀ ದಿನವೂ ಸೇವಿಸಿದರೆ ಉತ್ತಮ ಲಾಭ ದೊರೆಯುವುದು. ಪ್ರತೀ ದಿನವೂ ಸೇವಿಸಲು ಆಗಲ್ಲ ಅನ್ನುವವರು ವಾರಕ್ಕೆ ಮೂರು ನಾಲ್ಕು ಬಾರಿ ಸೇವಿಸಬಹುದು.

Leave a comment