Face pack : 100% ಮುಖದ ಸೌಂದರ್ಯ ಹೆಚ್ಚಿಸುವ ಫೇಸ್ ಫ್ಯಾಕ್

ನಮ್ಮ ಯುವ ಜನತೆಯನ್ನು ಅದರಲ್ಲೂ ಹುಡುಗಿಯರನ್ನು ಹೆಚ್ಚಾಗಿ ಕಾಡುವ ಸೌಂದರ್ಯ ಸಮಸ್ಯೆ ಎಂದರೆ ಮುಖದ ಮೇಲಿನ ಮೊಡವೆಗಳು ಹಾಗೂ ಮೊಡವೆಗಳಿಂದಾದ ಕಪ್ಪು ಕಲೆಗಳು ಸಾಮಾನ್ಯವಾಗಿ ಒಂದು ಹಂತದಲ್ಲಿ ಮುಖದ ಮೇಲೆ ಮೊಡವೆಗಳು ಮೂಡುವುದು ಸರ್ವೇಸಾಮಾನ್ಯವಾಗಿದೆ ಅದನ್ನು ನಿವಾರಿಸಲು ನಮ್ಮ ಯುವ ಜನತೆ ಯಾವ ಯಾವುದೋ ಕ್ರೀಮ್ ಗಳ ಮೊರೆ ಹೋಗುತ್ತಾರೆ ಅಷ್ಟೇ ಅಲ್ಲದೆ ಮುಖದ ಮೇಲೆ ಕಪ್ಪು ಕಲೆಗಳು ಮುಖದ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇವುಗಳನ್ನು ನಿವಾರಿಸಿಕೊಳ್ಳಲು ಒಂದು ಒಳ್ಳೆಯ ಫೇಸ್ ಪ್ಯಾಕ್ ಅನ್ನು ನಿಮಗೆ ಸಲಹೆ ಮಾಡುತ್ತಿದ್ದೇವೆ ಇದನ್ನು ಮಾಡುವುದರಿಂದ ನಿಮ್ಮ ಮುಖದ ಮೇಲಿನ ಕಲೆಗಳು ಮಾಯವಾಗುವುದಲ್ಲದೆ ನಿಮ್ಮ ಮುಖದ ಕಾಂತಿ ಕೂಡ ಹೆಚ್ಚುತ್ತದೆ.
ಈ ಫೇಸ್ ಪ್ಯಾಕ್ ಅನ್ನು ಮಾಡುವ ಮತ್ತು ಅದನ್ನು ಮುಖಕ್ಕೆ ಹಚ್ಚಿಕೊಳ್ಳುವ ವಿಧಾನವನ್ನು ತಿಳಿಯೋಣ. ಮೊದಲಿಗೆ ಒಂದು ಬೌಲ್ ನಲ್ಲಿ ಒಂದು ದೊಡ್ಡ ಚಮಚದಷ್ಟು ಮೊಸರು ನಂತರ ಅದಕ್ಕೆ ಒಂದು ಚಮಚ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಾಕು ನಮಗೆ ಬೇಕಾದ ಫೇಸ್ ಪ್ಯಾಕ್ ಸಿದ್ಧವಾದಂತೆ.ಇದರಲ್ಲಿ ಮೊಸರನ್ನು ಉಪಯೋಗಿಸುವುದರಿಂದ ಮೊಸರಿನಲ್ಲಿರುವ ಪ್ರೊಟೀನ್ ಕ್ಯಾಲ್ಸಿಯಮ್ ವಿಟಮಿನ್ ಡಿ ಹೆರಳವಾಗಿರುವುದರಿಂದ ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೇ ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ನಿಮ್ಮ ಚರ್ಮದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್ ಅನ್ನು ಹೋಗಲಾಡಿಸಿ ನಿಮ್ಮ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ಹೆಚ್ಚಿಸುತ್ತದೆ
ಇದರಲ್ಲಿ ಅಕ್ಕಿ ಹಿಟ್ಟನು ಉಪಯೋಗಿಸಲಾಗಿದೆ ಯಾಕಂದ್ರೆ ಅಕ್ಕಿ ಹಿಟ್ಟು ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಹಾಗೂ ಅಕ್ಕಿ ಹಿಟ್ಟಿನಲ್ಲಿರುವ ವಿಟಮಿನ್ ಬಿ ಹೊಸ ಜೀವಕೋಶಗಳನ್ನು ಉತ್ಪಾದಿಸುವಲ್ಲಿ ತುಂಬಾ ಸಹಾಯಕಾರಿಯಾಗಿರುತ್ತದೆ ಮತ್ತು ಅಕ್ಕಿ ಹಿಟ್ಟು ತರಿತರಿಯಾಗಿ ಇರುವುದರಿಂದ ಇದು ಸ್ಕ್ರಬ್ ನ ರೀತಿಯಲ್ಲೂ ಕೂಡ ಉಪಯೋಗವಾಗುತ್ತದೆ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ನಂತರ ಇಪ್ಪತ್ತು ನಿಮಿಷ ಒಣಗಳಲು ಬಿಟ್ಟು ಅದನ್ನು ಒಂದೆರಡು ನಿಮಿಷ ಮೆಲ್ಲಗೆ ಮುಖವನ್ನು ಮಸಾಜ್ ಮಾಡಿ ನಂತರ ಅದನ್ನು ನೀರಿನಿಂದ ತೊಳೆಯಿರಿ ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಮುಖ ಮೇಲಿನ ಕಪ್ಪು ಕಲೆಗಳು ಸಂಪೂರ್ಣ ಮಾಯವಾಗುವುದಲ್ಲದೆ ಮುಖದ ಕಾಂತಿ ಹೆಚ್ಚಾಗಿ ಮುಖ ಕ್ರಮೇಣ ಬೆಳ್ಳಗಾಗುವುದರಲ್ಲಿ ಯಾವುದೆ ಸಂದೇಹವಿಲ್ಲ.

Leave a comment