Mahadevappa and his friends – ಮಹಾದೇವಪ್ಪ ಮತ್ತು ಹಕ್ಕಿಗಳು

ಹೋಪುರವೆಂಬ ಊರೊಂದಿತ್ತು. ಅಲ್ಲಿ ಮಹಾದೇವಪ್ಪನೆಂಬ ದರ್ಜಿ ಇದ್ದನು. ಅವನು ದಿನವೂ ಬಣ್ಣ ಬಣ್ಣದ ಟೊಪ್ಪಿಗೆ ಹೊಲಿದು ಪೇಟೆಯಲ್ಲಿ ಮಾರಲು ಹಳ್ಳಿಯಿಂದ ಪಟ್ಟಣಕ್ಕೆ ಹೋಗುತ್ತಿದ್ದನು. ಹಾಗೆ ಹೋದಾಗ ಬಿಸಿಲಿನಿಂದ ವಿಶ್ರಾಂತಿ ಪಡೆಯಲು ಒಂದು ಮಾವಿನ ಮರದ ಕೆಳಗೆ ಮಲಗುತ್ತಿದ್ದನು. ಪ್ರತಿ ದಿನ ಮಾವಿನ ಮರ ಮಹಾದೇವಪ್ಪನಿಗೆ ತಿನ್ನಲು ಮಾಗಿದ ಹಣ್ಣನ್ನು ಕೊಡುತ್ತಿತ್ತು.

ಮಾವಿನಮರವು ದಿನವೂ ನನಗೆ ಮಾಡಿದ ಹಣ್ಣು ತಿನ್ನಲು ಕೊಡುತ್ತದೆ. ನಾನು ಮರಳಿ ಏನನ್ನೂ ಮರಕ್ಕೆ ಕೊಟ್ಟಿಲ್ಲ. ಆದ್ದರಿಂದ ಇಂದು ನಾದರೂ ಕೊಟ್ಟಾರಾಯಿತೆಂದು “ಮಾವಿನ ಮರವೇ ನಿನ್ನದು ಪರೋಪಕಾರ ಬುದ್ಧಿ! ನನಗೆ ತಿನ್ನಲು ಹಣ್ಣು ಕೊಡುತ್ತಿ! ನಾನೇನು ನಿನಗೆ ಕೊಡಲಿ ಹೇಳ?” ಎಂದನು. ”ಆಯಾ ನಾನು ಕೊಟ್ಟಿದ್ದನ್ನು ನೀನು ತಿಂದು ತೃಪ್ತಿ ಪಟ್ಟಿಯಲ್ಲಿ, ಅಷ್ಟೆ ಸಾಕು ನನಗೇನೂ ಆಸೆಯಿಲ್ಲ. ಕೊಡುವುದಾದರೆ ಪುಟ್ಟ ಪುಟ್ಟ ಹಕ್ಕಿಗಳು ನನ್ನ ಗಿಡದಲ್ಲಿವೆ, ಅವುಗಳಿಗೆ ನಾನು ನೆರಳು ಕೊಡಲು ಆಗುತ್ತಿಲ್ಲ ಏಕೆಂದರೆ, ಅವು ನನ್ನ ಟೊಂಗೆಯ ಮೇಲೆ ಕುಳಿತುಕೊಳ್ಳುತ್ತವೆ. ಆದ್ದರಿಂದ ನೀನು ಕೊಡುವುದಾದರೆ ಹಕ್ಕಿಗಳಿಗೆ ಏನಾದರೂ ಕೊಡು’ ಎಂದು ಮರ ಹೇಳಿತು, ಪುಣ್ಯಾತ್ಮರು ಯಾವಾಗಲೂ ಪರರ ಹಿತಚಿಂತಕರಾಗಿರುತ್ತಾರೆ ಎಂಬ ಮಾತು ಸುಳ್ಳಲ್ಲ ಎಂದ ಮಹಾದೇವಪ್ಪನು ಆ ಪುಟ್ಟ ಹಕ್ಕಿಗಳನ್ನು ಕಂಡನು. ಅವು ಸಣ್ಣ ಸಣ್ಣ ಟೊಂಗೆಯ ಮೇಲೆ ಕುಳಿತಿದ್ದವು. ನೋಡಲು ತುಂಬಾ ಸುಂದರವಾಗಿದ್ದವು. ನೋಡಿದ ಮಹಾದೇವಪ್ಪನಿಗೆ ಅಯ್ಯೋ ಎನಿಸಿತು.

ಮಹಾದೇವಪ್ಪನ ಬಳಿ ಚಿಕ್ಕ ಚಿಕ್ಕ ಕೆಂಪು, ಕೇಸರಿರು ತುಂಡುಗಳಿದ್ದವು, ಟೊಪ್ಪಿಗೆ ಹೊಲಿಯುವಾಗ ಕತ್ತರಿಸಿದ ಉಳಿದ ಬಟ್ಟೆಯನ್ನು, ಅವುಗಳಿಂದ ಮಹಾದೇವಪ್ಪನು ಸಣ್ಣ ಸಣ್ಣ ಟೊಪ್ಪಿಗೆಗಳನ್ನು ಹೊಲಿದು, ಹಾಗೆಯೇ ಮನೆಯಲ್ಲಿದ್ದ ಕಾಳು ಕಡಿಗಳನ್ನು ತಿನ್ನಲೆಂದು ತೆಗೆದುಕೊಂಡು ಹೋದನು. ಮಾವಿನ ಮರದ ಕೆಳಗೆ ನಿಂತು ಪ್ರೀತಿಯಿಂದ ಹಕ್ಕಿಗಳನ್ನು ಕರೆದನು ದಿನವೂ ಬಂದು ಗಿಡದೊಂದಿಗೆ ಮಾತಾನಾಡುವುದನ್ನು ಕೇಳಿಸಿಕೊಳ್ಳುತ್ತಿದ್ದ ಹಕ್ಕಿಗಳು ಈತ ಒಳ್ಳೆಯ ಮನುಷ್ಯನೆಂದು ತಿಳಿದು, ಅವನ ಮುಂದೆ ಸಾಲಾಗಿ ಬಂದು ಕುಳಿತವು. ಅನ್ನಗಳಿಗೆ ತಾನು ಸುಂದರವಾಗಿ ಹೊಲಿದುಕೊಂಡು ಬಂದ ಟೊಪ್ಪಿಗೆಯನ್ನು ತೊಡಿಸಿದನು, ತಿನ್ನಲು ಕಾಳುಗಳನ್ನು ಕೊಟ್ಟನು. ಕಾಳು ತಿಂದ ಹಕ್ಕಿಗಳು, ಟೊಪ್ಪಿಗೆ ಆರಿಸಿಕೊಂಡವು. ನೋಡಲು ಸುಂದರವಾಗಿ ಕಾಣುವ ಹಕ್ಕಿಗಳಿಗೆ ಬಿಸಿಲಿನಿಂದ ರಕ್ಷಣೆ ದೊರೆಯಿತು. ಹೀಗೆಯೇ

ಮಹಾದೇವನಿಗೆ ಮತ್ತು ಪಕ್ಷಿಗಳಿಗೆ ಗೆಳೆತನ ಬೆಳೆಯಿತು. ನಿತ್ಯವೂ ಅವುಗಳನ್ನು ನೋಡದಿದ್ದರೆ ಮಹಾದೇವನಿಗೆ ಊಟ ಸೇರುತ್ತಿರಲಿಲ್ಲ. ಮಹಾದೇವಪ್ಪನು ಬಾರದಿದ್ದರೆ ಹಕ್ಕಿಗಳು ಕಾಳುಗಳನ್ನು ತಿನ್ನುತ್ತಿರಲಿಲ್ಲ, ಒಂದು ದಿನ ಎಲ್ಲಾ ಹಕ್ಕಿಗಳು ದಿನವೆಲ್ಲಾ ಕಾದರೂ ಮಹಾದೇವಪ್ಪನು ಬರಲೇ ಇಲ್ಲ. ಮಹಾದೇವಪ್ಪನನ್ನು ಹುಡುಕಿಕೊಂಡು ಹಕ್ಕಿಗಳು ಹೋದವು, ಆದರೆ ಅಲ್ಲಿ ಮಹಾದೇವಪ್ಪನಿಗೆ ಆಪಾಯ ಕಾದಿತ್ತು. ಮಹಾದೇವಪ್ಪನು ಒಂದು ಕೆರೆಯಲ್ಲಿ ನೀರು ಕುಡಿಯಲು ಹೋಗಿ ಜಾರಿ ಬಿದ್ದಿದ್ದನು. ಮಹಾದೇವಪ್ಪನನ್ನು ಹೊಂಡದಿಂದ ಹೊರ ತರಲು ಹಕ್ಕಿಗಳು ಉಪಾಯ ಮಾಡಿದವು, ಎಲ್ಲಾ ಹಕ್ಕಿಗಳು ಹಾರಿ ಹೋಗಿ ಒಂದು ಲೋಹದ ತಂತ ತಂದವು, ತಂತಿ ಹಿಡಿದು ತರುವುದರಲ್ಲಿ ಮಹಾದೇವಪ್ಪನು ಹೊಂಡದಲ್ಲಿ ಮುಳುಗಿ ಬಿಟ್ಟಿದ್ದನು, ಹಕ್ಕಿಗಳು ಚಿಂವ್ ಚಿಂವ್ ಎಂದು ಕೂಗಿದವು ರಾತ್ರಿಯೆಲ್ಲ ತಂತಿಯ ಮೇಲೆ ಕುಳಿತು ಕಾಯ್ದವು, ಆದರೆ ಮಹಾದೇವಪ್ಪನು ಎದ್ದು ಬರಲಿಲ್ಲ, ಬೆಳಗಾಯಿತು, ಹಾಗಳು ಕಾಲಲ್ಲಿ ಹಿಡಿದ ತಂತಿಯ ಮೇಲೆ ಕುಳಿತೇ ಇದ್ದವು. ಈಗಲೂ ಹಕ್ಕಿಗಳು ಕುಳಿತೇ ನಿದ್ದೆ ಮಾಡುತ್ತವೆ. ರಾತ್ರಿ ತಮ್ಮ ಗೆಳೆಕಾರ ಮಹಾದೇವಪ್ಪನು ಬರುವನೆಂದು ನಿದ್ದೆ ಮಾಡದೇ ಕಾದು ಕುಳಿತಿರುತ್ತವೆ. ಅವನ ನೆನಪಾದ ಕೂಡಲೇ ಜೋರಾಗಿ ಎಲ್ಲವೂ ಒಂದೇ ಸಲ ಕರೆಯುತ್ತವೆ. ಹೀಗೆ ಮನುಷ್ಯನಿಗೆ ಮಿಗಿಲಾದ ಗೆಳೆತನ ಹಕ್ಕಿಗಳದ್ದು.

Leave a comment