Ranga’s punctuality – ರಂಗನ ಸಮಯಪ್ರಜ್ಞೆ!

ರಂಗ

ಶಾಮನೂರಿನ ಸರಕಾರಿ ಶಾಲೆಗೆ ಹೋಗುತ್ತಿದ್ದ. ಕೊರೊನಾ ಸೋಂಕಿರುವುದರಿಂದ ಶಾಲೆಗೆ ಘೋಷಿಸಲಾಗಿತ್ತು. ಹೀಗಾಗಿ ಮನೆಯಲ್ಲೇ ಆಟ ಪಾಠದಲ್ಲಿ ಸಮಯ ಕಳೆಯುತ್ತಿದ್ದ. ಮನೆಯ ಕೈತೋಟದಲ್ಲಿ ಕಳೆ ತೆಗೆಯುವುದು, ಪಾತಿ ಮಾಡುವುದು ಮತ್ತು ಗಿಡಗಳಿಗೆ ನೀರು ಹಾಯಿಸುವ ಕೆಲಸವನ್ನೂ ಮಾಡುತ್ತಿದ್ದ. ಅದೊಂದು ದಿನ ಮುಂಜಾನೆ ಮನೆಯ ಮುಂದಿನ ತೆಂಗಿನ ಗಿಡಗಳಿಗೆ ನೀರು ಹಾಯಿಸುತ್ತಿದ್ದ. ಆಗ ರಸ್ತೆಯಲ್ಲಿ ಕೆಮ್ಮಿದ ಸಪ್ಪಳವಾಯಿತು. ರಂಗ ಚುರುಕಾದ, ಆವರಣದ ಬಳಿ ಬಂದು ಹೊರಗೆ ಇಣುಕಿ ನೋಡಿದ. ಅಜ್ಜನೊಬ್ಬ ಕೆಮ್ಮುತ್ತ ಬಂದು ಅವರ ಮನೆ ಮುಂದಿನ ರಸ್ತೆಯಲ್ಲಿ ಕುಸಿದು ಕುಳಿತ. ತಕ್ಷಣ ರಂಗ ಕೂಗಿದ ಅಪ್ಪಾ, ಅಪ್ಪಾ ರಸ್ತೆಯಲ್ಲಿ ಅಜ್ಜನೊಬ್ಬ ಕೆಮ್ಮುತ್ತ ಬಿದ್ದರು. ಬೇಗ ಬ ಅವನ ತಂದೆ ನಿಂಗಣ್ಣನವರು ಮುಖಕ್ಕೆ ಮಾಸ್ಕನ್ನು ಏರಿಸುತ್ತ ಓಡಿ ಬಂದರು. ರಂಗನಿಗೆ ಮನೆಯೊಳಗೆ ಹೋಗಿ ಇನ್ನೆರಡು ಮಾಸ್ಟ್ ತರಲು ಹೇಳಿದರು. ರಂಗ ಓಡಿದ, ನಿಂಗಣ್ಣನವರು ವೃದ್ಧನೊಂದಿಗೆ ಮಾತಾಡಲು ಯತ್ನಿಸಿದರು. 65 70 ವಯಸ್ಸಿನ ಅವರು ಬಸವಳಿದಿದ್ದರು. ರಂಗ ಮಾಸ್ತಿನ ಜೊತೆಗೆ ನಿಂಬೆ ಪಾನಕವನ್ನೂ ತಂದ ಶಾಲೆಯಲ್ಲಿ ಶಿಕ್ಷಕರು ಕೊರೊನಾ ಬಗ್ಗೆ, ಪ್ರಥಮ ಚಿಕಿತ್ಸೆ ಬಗ್ಗೆ ತಿಳಿಸಿದ್ದು ಈಗ ಉಪಯೋಗಕ್ಕೆ ಬಂತು.

ನಿಧಾನಕ್ಕೆ ಪಾನಕ ಕುಡಿದ ವೃದ್ಧ ಮಾತಾಡಿದ. ಅವನ ಹೆಸರು ಕುಬೇರನೆಂದೂ, ಇನ್ನೊಬ್ಬ ಮಗ ಕೊರೊನಾದಿಂದ ಮೊನ್ನೆ ತೀರಿಕೊಂಡನೆಂದೂ, ಹೆಂಡತಿ ಕಳೆದ ವರ್ಷ ಅಪಘಾತವೊಂದರಲ್ಲಿ ಹೀರಿಕೊಂಡಳೆಂದೂ ಹೇಳಿದ. ಹಳ್ಳಿಯಲ್ಲಿ ಇರುವುದು ಮನೆ ಮಾತ್ರ, ಮಗ ಕೊರೊಡಾದಿಂದ ತೀರಿಕೊಂಡೊಡನೆ ತನ್ನನ್ನು ನಿಂದ ಬಹಿಷ್ಕಾರ ಹಾಕಿದ್ದಾರೆಂದೂ ವಿವರಿಸಿದ. ಎಲ್ಲವನ್ನೂ ಗ್ರಹಿಸಿದ ನಿಂಗಣ್ಣನವರು ಅವನ ಮುಖಕ್ಕೆ ಮಾಸ್ಕನ್ನು ಹಾಕಿಕೊಳ್ಳಲು ಹೇಳಿ, ಸಮೀಪದಲ್ಲಿದ್ದ ಪೊಲೀಸರ ನೆರವಿನಿಂದ ಅಂಬ್ಯುಲೆನ್ನ ತರಿಸಿಕೊಂಡು ಸರಕಾರಿ ದವಾಖಾನೆಗೆ ಕುಬೇರನನ್ನು ಸೇರಿಸಿದರು. ರೋಗಿಯ ಲಕ್ಷಣ ತಿಳಿದ ವೈದ್ಯರು ಕುಬೇರನನ್ನು ಪ್ರತ್ಯೇಕ ಕೋಣೆಯಲ್ಲಿಟ್ಟು ನಿಗಾವಹಿಸಿದರು. ಮಗ ಸೋಂಕಿನಿಂದ ತೀರಿಕೊಂಡಾಗ ಕುಬೇರನಿಗೆ ಮನೆಯಲ್ಲೇ ತಂಗಲು ವೈದ್ಯರು ಹೇಳಿದ್ದರು. ಆದರೆ ಅವರು ಕುಬೇರನು ಓಡಿ ಹೊಗಿರಬೇಕೆಂದು ಹುಡುಕುತ್ತಿದ್ದರು. ದವಾಖಾನೆಗೆ ಸೇರಿಸಲು ನೆರವಾದ ರಂಗನ ಸಮಯ ಪ್ರಜ್ಞೆಯನ್ನು ಮೆಚ್ಚಿಕೊಂಡರು.

ಕುಬೇರನ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳಿಸಿದರು. ವರದಿ ಬಂದಾಗ ಕೊರೊನಾ ಇರುವುದು ದೃಢೀಕೃತವಾಯಿತು. ಈಗ ಹತ್ತು ದಿನವಾಯಿತು, ಕುಬೇರ ಚೇತರಿಸಿಕೊಳ್ಳುತ್ತಿದ್ದಾನೆ. ಮಾಸ್ಕ್ ಧರಿಸಿ ದೂರದಿಂದ ಕುಬೇರನನ್ನು ನೋಡಿ ಬಂದ ಸಂಪೂರ್ಣ ಇವತ್ತು ಕುಬೇರ ಚೇತರಿಸಿಕೊಂಡಿದ್ದರಿಂದ ದವಾಖಾನೆಯಿಂದ ಬಿಡುಗಡೆಯಾದ, ರಂಗನಿಗೆ, ಮುಂಜಾನೆಯಿಂದ ಸಡಗರ, ಕುಬೇರನನ್ನು ನಿಂಗಣ್ಣನವರು ಮನೆಗೆ ಕರೆತಂದರು. ಮನೆಯ ಆತಿಥಿಯಂತೆ ಪ್ರೀತಿ ತೋರಿಸಿದರು. ಕುಬೇರನ ಕಣ್ಣು ತುಂಬಿ ಬಂತು. ಮತ್ತೆ 15 ದಿನಗಳ ಕಾಲ ನಿಂಗಣ್ಣನವರು ಪ್ರತ್ಯೇಕ ಕೋಣೆಯಲ್ಲಿರಿಸಿ ಊಟ, ಉಪಚಾರ ಮಾಡಿದರು.

ಈಗ ಚೇತರಿಸಿಕೊಂಡ ಕುಬೇರ, ಎಲ್ಲಾದರೂ ಹೋಗುವೆನೆಂದು ಒತ್ತಾಯಿಸಿದ, ನಿಂಗಣ್ಣನವರು ತಮ್ಮ ಮನೆಯಲ್ಲೇ ಇರಲು, ಕೊಂದರೂ, ಒಪ್ಪಲಿಲ್ಲ. ಕೊನೆಗೆ ವೃದ್ಧಾಶ್ರಮವೊಂದಕ್ಕೆ ಸೇರಿಸಿದರು. ಮನೆಯಿಂದ ಹೊರಡುವಾಗ ರಂಗ ಗಳ ಗಳ ಅಳತೊಡಗಿದ, ಮನೆಯವರೆಲ್ಲ ಹೇಳಲು ಕಣ್ಣೀರಾದರು. ಕುಬೇರ ನಿಮಗೆ ಕೃತಜ್ಞತೆ ಪದಗಳೇ ಇಲ್ಲವೆಂದು ನಿಂಗಣ್ಣನವರ ಕೈ ಹಿಡಿದು ಬಿಕ್ಕಳಿಸಿದರು. ಈಗ ವೃದ್ಧಾಶ್ರಮದಲ್ಲಿ ಕುಬೇರ ಅರಾಮಾಗಿದ್ದಾರೆ. ಆಗಾಗ ರಂಗ ವಾರದ ರಜೆಯಲ್ಲಿ ಅವರಿಗೆ ಹಣ್ಣು ಹಂಪಲು ಕೊಟ್ಟು, ಅವರೊಂದಿಗೆ ಆಟವಾಡಿ ಬರುತ್ತಿದ್ದಾನೆ.

Leave a comment